ಮುಂಬೈನಲ್ಲಿಯೂ ಪಂಚೆ ಉಟ್ಟು ಟ್ರೆಂಡ್ ಮಾಡಿದ ರಿಷಬ್ ಶೆಟ್ಟಿ


ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೂಡಿಬಂದ, ವಿಜಯ್ ಕಿರಗಂದೂರು ನಿರ್ಮಾಣದ 'ಕಾಂತಾರ' ಸಿನಿಮಾಕ್ಕೆ ಕಥೆ ಬರೆದು, ನಿರ್ದೇಶನ ಮಾಡಿ, ಶಿವ ಪಾತ್ರಕ್ಕೆ ಜೀವ ತುಂಬಿದವರು ರಿಷಬ್ ಶೆಟ್ಟಿ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಈ ಚಿತ್ರ ರಿಲೀಸ್ ಆಗಿತ್ತು. ಆಗ ಸಿಕ್ಕ ಪ್ರತಿಕ್ರಿಯೆ, ಮೆಚ್ಚುಗೆ ಪರಭಾಷೆಗೂ ಕೂಡ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗುವಂತೆ ಮಾಡಿತು.ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ 'ಕಾಂತಾರ' ಪರಭಾಷೆಯಲ್ಲಿಯೂ ಕೂಡ ರಿಲೀಸ್ ಆಗಿದೆ.

ಈ ಚಿತ್ರದ ಪ್ರಚಾರಕ್ಕಿಂತ ಯಶಸ್ಸಿನ ಕೂಟಗಳಲ್ಲಿ ರಿಷಬ್ ಅವರು ಭಾಗಿಯಾಗುತ್ತಿದ್ದಾರೆ. ಹೀಗಾಗಿ ಅವರು ತಮಿಳುನಾಡು, ಆಂಧ್ರ, ಮುಂಬೈಗೆ ಹೋಗಿಬರುತ್ತಿದ್ದಾರೆ.ಸದ್ಯ ಮುಂಬೈಗೆ ಹೋಗಿರುವ ರಿಷಬ್ ಶೆಟ್ಟಿ ಅವರು ಪಂಚೆಯಲ್ಲಿ ಗಮನಸೆಳೆದಿದ್ದಾರೆ. ಪಕ್ಕಾ ದಕ್ಷಿಣ ಭಾರತದ ಸ್ಟೈಲ್‌ನಲ್ಲಿ ಅವರು ಪಂಚೆ ಉಟ್ಟು ಮುಂಬೈನಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ.ದೊಡ್ಡ ಮಟ್ಟದಲ್ಲಿ ಹಿಟ್ ಆದ ಅಪ್ಪಟ ಕನ್ನಡ ಚಿತ್ರ 'ಕಾಂತಾರ' ಓಟಿಟಿಯಲ್ಲಿ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಮೂಡಿದೆ. ಇನ್ನೂ ಈ ಚಿತ್ರದ ರೂವಾರಿ ರಿಷಬ್ ಶೆಟ್ಟಿಯನ್ನರಸಿ ಬಾಲಿವುಡ್ ಆಫರ್‌ಗಳು ಬರುತ್ತಿವೆಯಂತೆ..