ಧಾರವಾಡ ತಾಲೂಕ ವೀರಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2017-18ನೇ ಶೈಕ್ಷಣಿಕ ವರ್ಷದಲ್ಲಿ ಇ-ವಿದ್ಯಾಲೋಕ ಮತ್ತು ವಿದ್ಯಾಪೋಷಕ ಸಂಸ್ಥೆಯವರ ಸಹಯೋಗದಲ್ಲಿ, 5 ,6,7 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂತರ್ಜಾಲ ಆಧಾರಿತ ಗಣಿತ, ವಿಜ್ಞಾನ, ಪಾಠಗಳು ಆರಂಭವಾದವು 18-19 ನೇ ಶೈಕ್ಷಣಿಕ ವರ್ಷದಲ್ಲಿ ಇಂಗ್ಲೀಷ ಪಾಠವೂ ಪ್ರಾರಂಭವಾಯಿತು.
2017-18 ನೇ ಸಾಲಿನಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡಿ, 10 ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೇದು ಉತ್ತೀರ್ಣಾರಾಗಿ ಪಿಯೂಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತೀರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗಲಿ ಎಂದು ಇ-ವಿದ್ಯಾಲೋಕ, ಎಲ್,ಟಿ,ಆಯ್,ಮೈಂಡ್ ಟ್ರೀ, ಮತ್ತು ಬೂಮಿ ಸಂಸ್ಥೆಯವರ ಸಹಯೋಗದಲ್ಲಿ ಲ್ಯಾಪಟಾಪ್ ವಿತರಣೆ ಕಾರ್ಯಕ್ರಮ ದಿನಾಂಕ 29/03/2023 ರಂದು ಬೆಂಗಳೂರಿನಲ್ಲಿ ನಡೇಯಿತು. ಇ ವಿದ್ಯಾಲೋಕ ಸಂಸ್ಥೆಯವರು ತರಗತಿ ನಡೆಸುವ ಶಾಲೆಗಳ ಪೈಕಿ ನಮ್ಮ ಶಾಲೆಯೂ ಒಂದು, ನಮ್ಮ ಶಾಲೆಯ ನಂದೀಶ ಮುರಗೋಡ ಮತ್ತು ಗುರುನಾಥ ಹುಲಕೊಪ್ಪ ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ತುಂಬಾ ಸಂತಸ ತಂದಿದೆ.
ಗ್ರಾಮೀಣ ವಿದ್ಯಾರ್ಥಿಗಳ ನಡುವೆ ಉನ್ನತ ಹುದ್ದೆಯಲ್ಲಿದ್ದು ತಮ್ಮ ಕೆಸಲದ ಬಿಡುವಿನ ಸಮಯದಲ್ಲಿ ಫಲಾಪೇಕ್ಷೇ ಇಲ್ಲದೇ ಶೈಕ್ಷಣಿಕ ಸೇವೆ ಒದಗಿಸುವ ಮಾನ್ಯರ ನಡುವೆ, ತಮ್ಮ ದುಡುಮೆಯ ಹಣದಲ್ಲಿ ಅಥವಾ ಕಂಪನಿಗಳ ಲಾಭದಲ್ಲಿ ಶೈಕ್ಷಣಿಕ ಸಾಮಗ್ರಗಳನ್ನು ಒದಗಿಸುವ ಉದ್ದೇಶ ಇಟ್ಟುಕೊಂಡವರ ಮದ್ಯ ಇ-ವಿದ್ಯಾಲೋಕ ಸಂಸ್ಥೆಯವರು ಸೇತುವೆಯಾಗಿ ತುಂಭಾ ಅದ್ಬುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ವೀರಾಪೂರ ಶಾಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಲು ನಮ್ಮ ಶಾಲೆಯ ಎಲ್ಲ ಗುರುಬಳಗದವರ ಸಹಕಾರವೂ ಅದ್ಬುತವಾಗಿತ್ತು, 2016-17ನೇ ಸಾಲಿನಲ್ಲಿಯೇ ಪ್ರಾರಂಭವಾಗಬೇಕಿದ್ದ ಈ ತರಗತಿಗಳು ಕಾರಣಾಂತರಗಳಿಂದ ಒಂದು ವರ್ಷದ ನಂತರ ಪ್ರಾರಂಭವಾಗಿತ್ತು. 2016-17 ನೇ ಸಾಲಿನಲ್ಲಿ ಇ-ವಿದ್ಯಾಲೋಕ ಸಂಸ್ಥೆಯ ಕರ್ನಲ್ ನಟರಾಜ ಸರ್, ಅಶ್ವಿನಿ ಮೇಡಂ ರನ್ನು ಜಿಲ್ಲಾ ಸಂಯೋಜಕರಾದ ಶ್ರೀ ಶ್ರೀಪತಿ ಸರ್ ಎಸ್ ಡಿ ಎಮ್ ಸಿ ಭಾಗವಾದ ನಮಗೆ ಪರಿಚಯಿಸಿದ್ದು ತುಂಬಾ ಉಪಕಾರವಾಯಿತು. ನಿರಂತರವಾಗಿ 6ನೇ ವರ್ಷವೂ ಇ-ವಿದ್ಯಾಲೋಕದ ಸೇವೆ ನಮ್ಮ ವಿದ್ಯಾರ್ಥಿಗಳಿಗೆ ಮುಂದುವರೆದಿದ್ದು ಸಂತೋಷದಾಯಕ ಸಂಗತಿ
ಧನ್ಯವಾದಗಳು e-vidayalok, LTI Maindtree and Boomi, 🙏🙏🙏🙏🙏
.jpeg)