Maharashtra Shocker: ಸುಷ್ಮಾ ಅಂಧಾರೆ ಹಂಚಿಕೊಂಡಿರುವ ವಿಡಿಯೋದಲ್ಲಿ, ಠಾಣೆಯೊಳಗೆ ಬೆಂಚಿನ ಮೇಲೆ ಯುವಕನೊಂದಿಗೆ ಕುಳಿತಿದ್ದ ಮಹಿಳೆಗೆ ಶಿವ ತಾಯ್ಡೆ ಕಪಾಳಮೋಕ್ಷ ಮಾಡುತ್ತಾನೆ. ಪೊಲೀಸ್ ಅಧಿಕಾರಿಗಳು ತಡೆಯುವವರೆಗೂ ಆಕೆಗೆ ಥಳಿಸಿದ್ದಾನೆ.

Maharashtra Viral Video: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಬ್ಬರಿಗೆ ಬಿಜೆಪಿ ನಾಯಕನೊಬ್ಬ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಿಜೆಪಿ ನಾಯಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಗರದ ಪೊಲೀಸ್ ಠಾಣೆಯೊಳಗೆ ಬಿಜೆಪಿ ಮುಖಂಡನೊಬ್ಬ ಮಹಿಳೆಯೊಬ್ಬರಿಗೆ ಥಳಿಸಿದ್ದಾನೆ. ಶಿವಸೇನಾದ ವಕ್ತಾರೆ ಸುಷ್ಮಾ ಅಂಧಾರೆ ಅವರು ಈ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಾಯಕ ಕೃತ್ಯವನ್ನು ಖಂಡಿಸಿದ್ದಾರೆ.
ಮಹಿಳೆಯ ಮೇಲೆ ಹಲ್ಲೆ ಮಾಡಿರುವುದು ಸ್ಥಳೀಯ ಬಿಜೆಪಿ ನಾಯಕ ಶಿವ ತಾಯ್ಡೆ ಎಂದು ತಿಳಿದುಬಂದಿದ್ದು, ಆತ ಮಲ್ಕಾಪುರದ ಕೃಷಿ ಸಮಿತಿಯ ಅಧ್ಯಕ್ಷನೂ ಆಗಿದ್ದಾನೆ. ಸುಷ್ಮಾ ಅಂಧಾರೆ ಹಂಚಿಕೊಂಡಿರುವ ವಿಡಿಯೋದಲ್ಲಿ, ಠಾಣೆಯೊಳಗೆ ಬೆಂಚಿನ ಮೇಲೆ ಯುವಕನೊಂದಿಗೆ ಕುಳಿತಿದ್ದ ಮಹಿಳೆಗೆ ಶಿವ ತಾಯ್ಡೆ ಕಪಾಳಮೋಕ್ಷ ಮಾಡುತ್ತಾನೆ. ಪೊಲೀಸ್ ಅಧಿಕಾರಿಗಳು ತಡೆಯುವವರೆಗೂ ಆಕೆಗೆ ಥಳಿಸಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಬಿಡಿಯಲು ಪ್ರಯತ್ನಿಸಿದ್ದಾರೆ. ಮಹಿಳೆ ಮೇಳೆ ಹಲ್ಲೆ ಮಾಡಿದ ಬಿಜೆಪಿ ನಾಯಕನ ಮೇಲೆ ಆಕೆಯ ಜೊತೆಗೆ ಕುಳಿತುಕೊಂಡಿದ್ದ ಯುವಕನೂ ಸಹ ಹಲ್ಲೇ ಮಾಡಲು ಮುಂದಾಗಿದ್ದಾನೆ.
ನಂತರ ಮಹಿಳೆ ಮತ್ತು ಪೊಲೀಸ್ ಅಧಿಕಾರಿಯ ಮುಂದೆಯೇ ಕುಳಿತು ಶಿವ ತಾಯ್ಡೆ ಏರು ಧ್ವನಿಯಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಆತ ಸಿಟ್ಟಿನಿಂದ ಚೇರ್‌ಅನ್ನು ಹಿಂದಕ್ಕೆ ತಳ್ಳಿ ಎದ್ದು ಹೋಗುತ್ತಾನೆ. ಮಹಿಳೆ ಹಾಗೂ ಬಿಜೆಪಿ ನಾಯಕ ಪೊಲೀಸ್ ಠಾಣೆಗೆ ಏಕೆ ಬಂದಿದ್ದರು? ಮಹಿಳೆ ಮೇಲೆ ಆತ ಹಲ್ಲೆ ನಡೆಸಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ.