Updated: 28 Oct 2022, 8:23 am
ಉದ್ಯಮಿ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಜತೆಗೆ, ಈ ದೃಶ್ಯವನ್ನು ಎಲ್ಲರೂ ಬಲು ಕುತೂಹಲದಿಂದಲೇ ನೋಡುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೈಲೈಟ್ಸ್:
- ಏಕಕಾಲದಲ್ಲಿ 5 ಸಾಧಕರ ಭಾವಚಿತ್ರ ಬಿಡಿಸುವ ಹುಡುಗಿ
- ಹುಡುಗಿಯ ಪ್ರತಿಭೆ ಕಂಡು ಎಲ್ಲರಿಗೂ ಅಚ್ಚರಿ
- ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ದೃಶ್ಯ
ಈಗಂತು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಸಾಧಕರ ಅದ್ಭುತ ದೃಶ್ಯಗಳು ಕಾಣಸಿಗುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಏಕಕಾಲದಲ್ಲಿ 15 ಸಾಧಕರ ಭಾವಚಿತ್ರವನ್ನು ಬಿಡಿಸುವ ಹುಡುಗಿಯ ದೃಶ್ಯ. ಈ ದೃಶ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸದೇ ಇರದು.
ಉದ್ಯಮಿ ಆನಂದ್ ಮಹೀಂದ್ರಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯ. ಇವರು ಹಂಚಿಕೊಳ್ಳುವ ವಿಡಿಯೋಗಳು ಬಹುಬೇಗ ನೆಟ್ಟಿಗರ ಗಮನ ಸೆಳೆಯುತ್ತವೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ. ಇಲ್ಲೊಬ್ಬರು ಪ್ರತಿಭಾವಂತ ಹುಡುಗಿ ಸರಿಯಾಗಿ ಜೋಡಿಸಿದ ಕೋಲುಗಳಲ್ಲಿ ಕಟ್ಟಿದ್ದ ಪೆನ್ನಿನ ಮೂಲಕ ಚಿತ್ರ ಬಿಡಿಸಿದ್ದಾರೆ. ಏಕಕಾಲದಲ್ಲಿ ಅತ್ಯಂತ ನಿಖರವಾಗಿ ಮತ್ತು ಅಷ್ಟೇ ಸುಂದರವಾಗಿ ಈ ಹುಡುಗಿ 15 ಮಹನೀಯರ ಭಾವಚಿತ್ರವನ್ನು ಬಿಡಿಸಿದ್ದಾರೆ. ಇವರ ಪ್ರತಿಭೆ ಒಂದು ಕ್ಷಣ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ. ` ಇದು ಹೇಗೆ ಸಾಧ್ಯ? ನಿಸ್ಸಂಶಯವಾಗಿ ಈಕೆ ಪ್ರತಿಭಾವಂತ ಕಲಾವಿದೆ. ಆದರೆ, ಒಂದೇ ಬಾರಿಗೆ 15 ಭಾವಚಿತ್ರಗಳನ್ನು ಚಿತ್ರಿಸುವುದು ಕಲೆಗಿಂತ ಹೆಚ್ಚಿನದು. ಇದು ಒಂದು ಪವಾಡ! ಈಕೆಯ ಬಳಿ ಇರುವ ಯಾರಾದರೂ ಈ ಸಾಧನೆಯನ್ನು ಖಚಿತಪಡಿಸಬಹುದೇ?. ಇದು ಖಚಿತವಾದರೆ ಈಕೆಯನ್ನು ಪ್ರೋತ್ಸಾಹಿಸಬೇಕು ಮತ್ತು ನಾನು ಸ್ಕಾಲರ್‌ಶಿಪ್ ಮತ್ತು ಇತರ ರೀತಿಯ ಬೆಂಬಲವನ್ನು ಒದಗಿಸಲು ಸಂತೋಷಪಡುತ್ತೇನೆ' ಎಂಬ ಕ್ಯಾಪ್ಶನ್‌ನೊಂದಿಗೆ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇಲ್ಲಿದೆ ವಿಡಿಯೋ :
ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ಹುಡುಗಿಯ ಪ್ರತಿಭೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜತೆಗೆ, ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.