
ಸೂರ್ಯನೂ ನಗ್ತಾನೆ ಎಂದರೆ ನೀವು ನಂಬುವಿರಾ ? ನಾಸಾ ಸೆರೆ ಹಿಡಿದ ಚಿತ್ರದಲ್ಲಿದೆ ಅದ್ಬುತ ದೃಶ್ಯ
ಸಾಮಾನ್ಯವಾಗಿ ನಾಸಾ, ಇಸ್ರೋ ಬಾಹ್ಯಾಕಾಶ ಸಂಸ್ಥೆಗಳು ಆಗಾಗ ಖಗೋಳ ವಿಸ್ಮಯದ ಹಲವು ಫೋಟೋಗಳನ್ನು ಬಹಿರಂಗಪಡಿಸುತ್ತಿರುತ್ತವೆ. ಸೂರ್ಯಗ್ರಹಣ ಚಂದ್ರಗ್ರಹಣ, ಮಂಗಳನ ಅಂಗಳದ ಹಲವು ಫೋಟೋಗಳನ್ನು ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಬಿಡುಗಡೆ ಮಾಡಿವೆ. ಅದೇ ರೀತಿ ಈಗ ನಾಸಾ ಬಿಡುಗಡೆ ಮಾಡಿರುವ ಫೋಟೋ ಮಾತ್ರ ಭಾರಿ ಕುತೂಹಲ ಮೂಡಿಸಿದೆ.
ರವಿಮಾಮ ನಗುತ್ತಾನೆ ಎಂದು ಮಕ್ಕಳಿಗೆ ಹೇಳುವ ಕಥೆಗಳಲ್ಲಿ ಕೇಳಿರುತ್ತೇವೆ, ಕಥೆಯನ್ನೂ ಹೇಳಿರುತ್ತೇವೆ. ಆದರೆ ನಿಜವಾಗಿಯೂ ಸೂರ್ಯ ಈಗ ನಕ್ಕಿದ್ದಾನೆ ! ನಾಸಾದ ಕ್ಯಾಮೆರಾ ಕಣ್ಣಿನಲ್ಲಿ ನಗುವ ಸೂರ್ಯ ಸೆರೆಯಾಗಿದ್ದಾನೆ. ಹೌದು, ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಫೋಟೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸೂರ್ಯ ನಗುವಂತೆ ಗೋಚರಿಸುತ್ತಿದೆ.
Sun is smiling down on us (ಸೂರ್ಯ ಕೆಳಗಿರುವ ನಮ್ಮನ್ನು ನೋಡಿ ನಗುವನು) ಎಂಬ ಇಂಗ್ಲಿಷ್ ನುಡಿಗಟ್ಟನ್ನು ನಿಜ ಮಾಡುವಂತಿದೆ ಈ ಫೋಟೋ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ನೇರಳಾತೀತ ಬೆಳಕಿನಲ್ಲಿ ನೋಡಿದರೆ, ಸೂರ್ಯನ ಮೇಲಿನ ಈ ಡಾರ್ಕ್ ಪ್ಯಾಚ್‌ಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ ಮತ್ತು ಅವುಗಳ ವೇಗದ ಸೌರ ಮಾರುತವು ಬಾಹ್ಯಾಕಾಶಕ್ಕೆ ಚಿಮ್ಮುವ ಪ್ರದೇಶಗಳಾಗಿವೆ ಎಂದು ನಾಸಾ ಈ ಫೋಟೋ ಟ್ವೀಟ್ ಮಾಡಿ ಬರೆದುಕೊಂಡಿದೆ.