ಹೆಂಗ ಇದ್ದಿಯೋ ನಿ ಮೋದಲ!!

 ಸಿಕ್ಕ ಅವಕಾಶ ತಪ್ಪಿಸಿಕೊಂಡರೆ ಮರಗಬೇಕ್‌ ಆಗತೈತಿ


ನಾನು ಕೇಳಿದ ಘಟನೆ. ಒಬ್ಬ ಕರುಣಾಳು ಶ್ರೀಮಂತ ದೇವಸ್ಥಾನಕ್ಕೆ ಬಂದಾಗಲೆಲ್ಲ

ದೇವಸ್ಥಾನದ ಹೊರಗೆ ಕುಳಿತ ಇಬ್ಬರು ಯುವಕ ಭಿಕ್ಷುಕರಿಗೆ ತಲಾ ೨ ರೂಪಾಯಿ

ಕೊಟ್ಟು “ಹೋಗುತ್ತಿದ್ದ ಅವರು ಶ್ರೀಮಂತನಿಗೆ "ನಿಮ್ಮಿಂದಾಗಿ ನಮಗೆ ಎರಡು ಹೊತ್ತು

ಊಟ ಸಿಗುತ್ತದೆ! ನೀವು ದೇವರು!' ಎಂದು ಹೇಳಿ ಮತ್ತೆ ಮತ್ತೆ ವಂದಿಸುತ್ತಿದ್ದರು. ಅವರ

ಮಧ್ಯೆ ಒಂದು ರೀತಿಯ ಸ್ನೇಹ ಬೆಳೆದಿತ್ತು. ಒಂದು ದಿನ ಆ ಶ್ರೀಮಂತ ಬಂದು ಇಬ್ಬರು

ಭಕ್ವಕರಿಗೆ ಹೇಳಿದ 'ನಾನು ಮೂರು ನಾಲ್ಕು ತಿಂಗಳ ಕಾಲ ದೇವಸ್ಥಾನಕ್ಕೆ ಬರುವುದಿಲ್ಲ

ನಿಮ್ಮಿಬ್ಬರಿಗೂ ತಲಾ ಇನ್ನೂರು ರೂಪಾಯಿ ಕೊಟ್ಟು ಹೋಗುತ್ತೇನೆ. ಅದನ್ನು ದಿನಕ್ಕೆ

ಎರಡು ರೂಪಾಯಿಯಂತೆ ಬಳಸಿಕೊಳ್ಳಿ' ಎಂದು ಹೇಳಿ ಹಣವನ್ನು ಕೊಟ್ಟು ಹೋದ.

ಆ ಶ್ರೀಮಂತ ಆರು ತಿಂಗಳುಗಳ ಕಾಲ ದೇವಸ್ಥಾ ನಕ್ಕೆ ಬರಲೇಇಲ್ಲ ಬಂದೆ. ನಂತರ 

ಆ ಭಕ್ಷಕರೆಲ್ಲಿದ್ದಾರೆಂದು ಗಮನಿಸಿದ. ಅಲ್ಲಿ ಹರಕ ಬಟ್ಟೆಯ ಭಿಕ್ಷುಕ ಮಾತ್ರ ಕುಳಿತಿದ್ದ ಶ್ರೀಮಂತನ ನ್ನು ಗುರುತಿಸಿ " ಸ್ವಾಮಿ, ನೀವು ಇಷ್ಟು ದಿನ ಎಲ್ಲಿಗೆ ಹೋಗಿದ್ದಿರಿ. ನೀವು ಕೊಟ್ಟ ಇನ್ನೂರು ಕೂಪಾಯಿ ತರಾ ಖರ್ಚಾಗಿ “ಹೋಯಿತು. ಆರೆಹೊಟ್ಟೆಯಲ್ಲಿ ಕಾಲ ಕಳೆಯುತ್ತಿದ್ದೇನೆ' ಎಂದು ಗೊಳಾಡಿದ. ಶ್ರೀಮಂತ "ಚಿಂತಿಸಬೇಡ ನಾನು ಇನ್ನು ಮುಂದೆ ಬರುತ್ತಿರುತ್ತೇನೆ' ಎಂದು ಹೇಳಿ ಒಂದಷ್ಟು ಹಣ ಕೊಟ್ಟು ಹೊರಟ.




ಆ ಇನ್ನೊಬ್ಬ ಭಿಕ್ಷುಕ ಎಲ್ಲಿಎಂದು ಕೇಳಬೇಕೆನ್ನುವಷ್ಟರಲ್ಲೇ ಒಳ್ಳೆಯ ಉಡುಪು ಧರಿಸಿದ್ದ

ಒಬ್ಬ ವ್ಯಕ್ತಿ ಐದ ಶ್ರೀಮಂತನಿಗೆ ನಮಸ್ಕರಿಸಿದ. ಶ್ರೀಮಂತನಿಗೆ ಅವನಾರೆಂದು ಗುರುತು.

ಸಿಗಲಿಲ್ಲ ಆಗ ಅವನೇ ಪರಿಚಯ ಮಾಡಿಕೊಂಡು ಹೇಳಿದ. "ಸ್ವಾಮಿ, ನಾನೂ

ಇಲ್ಲೇ ಭಿಕ್ಷೆ ಬೇಡುತ್ತಿದ್ದೆ. ನೀವು ಅಂದು ಇನ್ನೂರು ರೂಪಾಯಿ ಒಟ್ಟಿಗೆ ಕೊಟ್ಟ ಮೇಲೆ

ನಾನು ಅದರಿಂದ ಒಂದು ಬುಟ್ಟಿ ಬಿಡಿ ಹೂಗಳನ್ನು ಕೊಂಡು ತಂದೆ. ಹೂವಿನ ಹಾರ

ಪೋಣಿಸಿ ಇಲ್ಲಿ ಫುಟ್‌ಪಾತಿನಲ್ಲೇ ಮಾರಶತ್ತಿದೆ. ತಕ್ಕ ಮಟ್ಟಿನ ಲಾಭ ಬರುತ್ತಿತ್ತು ಕೆಲವು

ದಿನಗಳ ನಂತರ ಹೂವಿನ ಜತೆಗೆ ತಾಟು, ಕಡ್ಡಿ ಕಪ್ಪ ರ್ಪೂರವನ್ನು. ಮಾರಲು

ಮೊದಲು ಮಾಡಿದೆ. ಯಾರೋ ಪುಣ್ಯಾ ತ್ಥರು ಒಂದು ಹಳೆಯ ಪೆಟ್ಟಿಗೆ ಅಂಗಡಿಯನ್ನು

ಕೊಟ್ಟರು. ಆದೋ ನೋಡಿ ಅಲ್ಲಿ ಅಂಗಡಿಯನ್ನು ಇಟ್ಟಿದ್ದೇನೆ. ನೀವು. ಕೊಟ್ಟ ಇನ್ನೂರು.

ರೂಪಾಯಿಯಿಂದಾಗಿ ಭಿಕ್ಷುಕನಾಗಿದ್ದ ನಾನು ಈಗಸ ಸಣ್ಣವ್ಯಾಪಾರಿಯಾಗಿದ್ದೇನೆ'  ಎಂದು

ನಮಸ್ಕರಿಸಿದ.


ಶ್ರೀಮಂತನಿಗೆ ಆಶ್ಚರ್ಯವೋ, ಆಶ್ಚರ್ಯ. ಏಕೆಂದರೆ ಇಬ್ಬರಿಗೂ ಒಂದೇ ರೀತಿಯ

ಹಣ ಕೊಟ್ಟರೂ ಒಬ್ಬ ಹಾಗೇ ಉಳಿದಿದ್ದ ಮತ್ತೊಬ್ಬ ಪ್ರಗತಿ ಹೊಂದಿದ್ದ ಆತನಿಗೆ

ಬಹಳ ಸಂತೋಷವಾಯಿತು. ಸಾರ್ಥಕ ಭಾವನೆ ಹೂಟ. ನಮಗೂ ಜೀವನದಲ್ಲಿ

ಅವಕಾಶಗಳು ಒದಗಿ ಬರುತ್ತವೆ. ಯಾರೋ ನಿಂಬೆಹಣ್ಣನ್ನು ಕೊಡುತ್ತಾರೆ. ನಮ್ಮಲ್ಲಿ

ಕೆಲವರು ಹುಳಿ ನಿಂಬೆಹಣ್ಣು ಎಂದು ಬಿಸಾಡುತ್ತೇವೆ. ಮತ್ತೆ ಕೆಲವರು ಮುಖ.

ಕಿವುಚಿಕೊಂಡು ನಿಂಬೆಹಣ್ಣು ಎಂದು ಬಳಸುತ್ತೇವೆ. ಎಲ್ಲೋ ಕರವರು ನಿಂಬೆಹಣ್ಣಿನ '

ಜತೆಗೆ ಸ್ವಲ್ಪ ಸಕ್ಕರೆ, ಸ್ವಲ್ಪ 'ನೀರು ಬೆರಸಿ ಶರಬತ್‌ ಮಾಡಿಕೊಂಡು ಕುಡಿಯುತ್ತೇವೆ.

ನಿಂಬೆಹಣ್ಣು, ಕೊಟ್ಟವರನ್ನು ಸ್ಮರಿಸುತ್ತೇವೆ. ನಾವು ಯಾವ ವರ್ಗಕ್ಕೆ ಸೇರಬೇಕೆಂಬುದು

ನಮಗೆ ಬಿಟ್ಟದ್ದು.  ಕೆಲವರು "ನಮಗೆ ಬೇಳೆ- ಬೆಲ್ಲ ಕೊಡುತ್ತಾನೆ. ಹೋಳಿಗೆ ನಾವೇ

ಮಾಡಿಕೊಳ್ಳಬೇಕು!.

ನಿಮಗೆ ಈ ಕತೆ ಇಷ್ಟವಾದರೆ ಆದಷ್ಟು ಬೆರೆಯವರಿಗೆ ತಲುಪಿಸಿ