ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಬಹಳ ಸಡಗರ, ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಅದೇ ರೀತಿಯಾಗಿ ದೀಪಾವಳಿ ಹಬ್ಬದಿಂದಾಗಿ ಅನೇಕ ಅನಾಹುತಗಳು ಕೂಡ ಸಂಭವಿಸುತ್ತದೆ. ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿಗಾಗಿ ಏನೇನೋ ಹರ ಸಾಹಸ ಮಾಡಲು ಹೋಗಿ ಎಡವಟ್ಟೂ ಸಹ ಮಾಡಿಕೊಳ್ತಾರೆ.
ಬ್ರ್ಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಶ್ಚರ್ಯಕರ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ಯುವಕ ತನ್ನ ಕಾರಿನ ಮೇಲೆ ಪಟಾಕಿ ಸಿಡಿಸಿ ಡಿಪ್ರೆಂಟ್ ಆಗಿ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾನೆ. ಇನ್ನೂ ಈ ವಿಡಿಯೋ ಎಲ್ಲೆಡೆ ಫುಲ್ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜಸ್ಥಾನದ ಪ್ರಸಿದ್ಧ ಯೂಟ್ಯೂಬರ್ ಒಬ್ಬ ತನ್ನ ಸ್ವಿಫ್ಟ್ ಕಾರಿನ ಮೇಲೆ ಸುಮಾರು 1 ಲಕ್ಷ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾನೆ.
ಯೂಟ್ಯೂಬರ್ ಆಗಿರುವ ಅಮಿತ್ ಶರ್ಮಾ ಅವರು ತಮ್ಮ ಚಾನಲ್‌ನಲ್ಲಿ ವಿವಿಧ ರೀತಿಯ ವಿಡಿಯೊಗಳನ್ನು ಮಾಡುವ ಮೂಲಕ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಪ್ರಸಿದ್ಧ ಯೂಟ್ಯೂಬರ್ ಅಮಿತ್ ಶರ್ಮಾ ತಮ್ಮ ಕಾರಿನ ಮೇಲೆ ಪಟಾಕಿ ಸಿಡಿಸಿದ ಬಳಿಕ ಕಾರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ಕಾರು ಗಾಜು ಒಡೆದು ಜಖಂಗೊಂಡಿದೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲೆಡೆ ವೈರಲ್ ಆಗುತ್ತಿದೆ.