ಬಂದಂತಹ ಕೆಲಸದ ಕಡೆ ಗಮನ ಇರಲಿ
ಮೂವತ್ತು ವರ್ಷಗಳ ಹಿಂದಿನ ಘಟನೆ. ಅಂದು ಕಾಲೇಜಿನ ತರಗತಿಗಳ ಪ್ರಾರಂಭದ ದಿನ. ವಿದ್ಯಾರ್ಥಿ ವಿದ್ಯಾರ್ಥಿನಿಯರದ್ದು ಸಮ ಸಂಖ್ಯೆ. ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಮಾರಂಭ. ಪ್ರಾಂಶುಪಾಲರ ಸ್ವಾಗತ ಭಾಷಣ ಹೀಗಿತು;
'ನಿಮ್ಮನೆಲ್ಲ ಸ್ವಾಗತಿಸುವ ಮುಂಚೆ ನಿಮಗೊಂದು ಕಥೆ. ಒಬ್ಬ ರಾಜನಿಗೆ ಯಾಗಕ್ಕಾಗಿ ಒಂದು ಸಾತಕ ಹಣ್ಣು ಬೇಕಾಗಿತ್ಕು ಆ ಹಣ್ಣು ಕಾಡಿನ ಮಧ್ಯೆ ಇರುವ ಆಶ್ರಮ ಒಂದರಲ್ಲಿ ಇತ್ತು ತನ್ನ ಸೈನಿಕರೊಂದಿಗೆ ಆಶ್ರಮಕ್ಕೆ ಹೋದ. ಆಶ್ರಮದ ಋಷಿಯನ್ನು ಕಂಡು ಆ ಹಣ್ಣನ್ನು ನೀಡುವಂತೆ ಬೇಡಿಕೊಂಡ. ಸಾಕ್ಷಾತ್ ರಾಜನೇ ಬಂದಿರುವುದನ್ನು ಕಂಡು ಸಂತೋಷಪ ಪಟ್ಟ ಆ ಋಷಿ ಆತನನ್ನು ಆದರದಿಂದ ಸತ್ಕರಿದ. ಹಣ್ಣು ಕೀಳಿಸಿದ. ಸತ್ಕಾರ ಸ್ವೀಕರಿಸುವಾಗ ರಾಜ ಆಶ್ರಮವನ್ನು "ಚೆನ್ನಾಗಿ ಗಮನಿಸಿದ. ಅಲ್ಲಿಯಥೇಚ್ಚ ವಾಗಿ ಹಾಲು ಕೊಡುವ ಹಸುಗಳು, ತುಂಬಾ ಬೆಲೆಬಾಳುವ ಉಪಕರಣಗಳೂ ಇದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಮದುವೆಯಾಗದ ಬಲು ಸುಂದರಿಯಾದ ಋಷಿಯ ಮಗಳು ಇದ್ದಳು. "ಇವೆಲ್ಲ ಈ ಕಾಡಿನ ಮಧ್ಯೆ ಇರುವ ಋಷಿಗೆ ಏಕೆ? ನನ್ನ ಅರಮನೆಯಲ್ಲಿ ಇವೆಲ್ಲ ಶೋಭಿಸುತ್ತವೆ' ಎಂದು ಹೇಳಿ ಆ ಹಸುಗಳನ್ನು ಉಪಕರಣಗಳನ್ನು ತೆಗೆದುಕೊಂಡು, ಆ ಋಷಿಯ ಮಗಳನ್ನು ಒತ್ತಾಯದಿಂದ ಮದುವೆ ಮಾಡಿಕೊಂಡು, ಕರೆದುಕೊಂಡು ಹೊರಟುಹೋದ. ಆ ಋಷಿಗೆ ತುಂಬಾ ನೋವಾಯಿತು. ನೋವು ಕಡಿಮೆಯಾದ ನಂತರ ಸಾವರಿಸಿಕೊಂಡು ನೋಡಿದಾಗ ಆ ಮರದ ಹಣ್ಣನ್ನು ರಾಜ ಅಲ್ಲೇ ಬಿಟ್ಟು ಹೋಗಿದ್ದ ಬೇಕಾದದ್ದನ್ನು ಬಿಟ್ಟು ಬೇಡವಾದದ್ದನ್ನೆಲ್ಲ ಮಾಡಿಹೋಗಿದ್ದ.
ಪ್ರಿಯ ವಿದ್ಯಾರ್ಥಿಗಳೆ ಆ ರಾಜನ ಬಗ್ಗೆ ನಿಮಗೆ ಏನನಿಸುತ್ತದೆ?' ವಿದ್ಯಾರ್ಥಿ ವಿದ್ಯಾರ್ಥಿನಿಯರು "ಆ ರಾಜ ಮಾಡಿದ್ದು ಅಕ್ಟಮ್ಯ ಅಪರಾಧ! "ತಪ್ಪುತಪ್ಪು “ಬಂದ ಕಾರ್ಯ ಮರೆತ ರಾಜ ಆಯೋಗ್ಯ' ಎಂದೆಲ್ಲ ಕೂಗಿದರು. ಕೂಗಾಟ ನಿಂತ ನಂತರ ಪ್ರಾಂಶುಪಾಲರು ಮುಂದುವರೆಸಿದರು.
ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇಕೆಂದರೆ ನೀವು ಯಾರೂ ಆ ರಾಜ ಮಾಡಿದ ತಪ್ಪುಮಾಡಬಾರದು! ನೀವು ಈ ಕಾಲೇಜಿಗೆ ಬಂದಿರುವುದು ಕಾಲಹರಣಕ್ಕಾಗಿ ಅಲ್ಲ
ಚಳವಳಿಗಳು ಮಾಡಲಿಕ್ಕಾಗಿ ಅಲ್ಪ ರಾಜಕಾರಣ ಮಾಡಲಿಕ್ಕಾಗಿ ಅಲ್ಲ ಅದಕ್ಕೆ ಬೇರೆ ಬೇರೆ ವೇದಿಕೆಗಳಿವೆ.
ಪ್ರೇಮಪ್ರಕರಣಗಳಲ್ಲಿ ಸಿಲುಕಿಕೊಂಡು ಮದುವೆ ಮಾಡಿಕೊಂಡು
ಹೋಗುವುದಕ್ಕಾಗಿಯೂ ಅಲ್ಲ ಅದಕ್ಕೆ ಮ್ಯಾರೇಜ್ ಬ್ಯೂರೊಗಳಿವೆ! ದಯವಿಟ್ಟು ನೀವೆಲ್ಲ ನೆನಪಿನಲ್ಲಿಡಿ ನೀವು ಬಂದಿರುವುದು ಕೇವಲ ಜ್ಞಾನಾರ್ಜನೆಗಾಗಿ! ಪದವಿ
ಪಡೆಯುವುದಕ್ಕಾಗಿ! ನಿಮಗೆಲ್ಲಹೃತ್ಪೂರ್ವಕ ಸ್ವಾಗತ. ಎಲ್ಲರಿಗೂ ಒಳ್ಳೆಯದಾಗಲಿ!'
ಈ ಘಟನೆ ನಡೆದು ಮೂವತ್ತಕ್ಕೂ ಹೆಚ್ಚು ವರ್ಷಗಳಾಗಿವೆ. ಇಂದು ಪರಿಸ್ಥಿತಿ
ಬದಲಾಗಿದೆ. ಸೆಲ್ ಫೋನ್‌ಗಳು, ಎಸ್.ಎಂ.ಎಸ್.ಗಳು, ಚಿತ್ರ ಎಚಿತ್ರ ಉಡುಪುಗಳು,
ಬೋಳು ಹಣೆಯ ನಿರಾಭರಣ ವಿದ್ಯಾರ್ಥಿನಿಯರು, ಕಿವಿಗೆ ಓಲೆ ಹಾಕಿಕೊಳ್ಳುವ
ವಿದ್ಯಾರ್ಥಿಗಳು, ಮೋಟು ಕೂದಲಿನ ಬಾಬ್ ಕಟ್ ವಿದ್ಯಾರ್ಥಿನಿಯರು, ಉದ್ದನೆಯ
ಕೂದಲು ಬಿಟ್ಟ ವಿದ್ಯಾರ್ಥಿಗಳೂ. ಈಮೇಲ್‌ಗಳಲ್ಲಿ ಮುಳುಗಿರುವ ಮೇಲ್-
ಫೀಮೇಲ್‌ಗಳು, ಫಾಸ್ಟ್‌ಫುಡ್‌ಗಳು, ಫಾಸ್ಟ್ ಮೋಟಾರು ಬೈಕ್‌ಗಳು, ಫಾಸ್ಟ್ ಹುಡುಗ
ಹುಡುಗಿಯರು! ಇವೆಲ್ಲ ನಳಿನಳಿಸುತ್ತಿರುವ ಕಾಲೇಜಿನ ಅಂಗಳಗಳು ಇಂದು ಎಲ್ಲೆಡೆ
ಇವೆ. ಆದರೆ ಆ ಪ್ರಾಂಶುಪಾಲರು ಹೇಳಿದ 'ನೀವು ಬಂದಿರುವುದು ಜ್ಞಾನಾರ್ಜನೆಗಾಗಿ,
ಪದವಿ ಪಡೆಯುವುದಕ್ಕಾಗಿ' ಎಂಬ ಬುದ್ಧಿಮಾತು ಇಂದಿಗೂ ಪ್ರಸ್ತುತವಾಗಿದೆ.