ಬೆಂಕಿಯೊಂದಿಗೆ ಸರಸವಾಡಲು ಹೋಗಿ ಇಲ್ಲೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದು ಎಲ್ಲರಿಗೂ ಪಾಠವಾಗಿದೆ. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಹೈಲೈಟ್ಸ್:
- ಬೆಂಕಿಯೊಂದಿಗೆ ಸರಸವಾಡಲು ಹೋಗಿ ಸಂಕಷ್ಟ
- ಸ್ಟಂಟ್ ಮಾಡಲು ಹೋದಾಗ ಎದುರಾಗಿತ್ತು ಶಾಕ್
- ಸೋಶಿಯಲ್ ಮೀಡಿಯಾದಲ್ಲಿ ಭಯಾನಕ ದೃಶ್ಯ ವೈರಲ್
ಇದು ಯುವಕನ ಗಡ್ಡಕ್ಕೆ ಬೆಂಕಿ ಹೊತ್ತಿಕೊಳ್ಳುವ ಭಯಾನಕ ದೃಶ್ಯ. ಎಲ್ಲರೆದುರು ತನ್ನ ಸ್ಟಂಟ್ ಪ್ರದರ್ಶಿಸಲು ಹೋಗಿ ಈ ಯುವಕ ಸಂಕಷ್ಟ ಎದುರಿಸಿದ್ದಾನೆ. ಈ ವೇಳೆ, ಅಲ್ಲೇ ಇದ್ದ ಸ್ನೇಹಿತರು ಈತನ ಸಹಾಯಕ್ಕೆ ಧಾವಿಸಿದ್ದರಿಂದ ದೊಡ್ಡ ದುರಂತ ತಪ್ಪಿದಂತಿದೆ.
ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಯುವಕನೊಬ್ಬ ಬಾಯಿಗೆ ಪೆಟ್ರೋಲ್ ತುಂಬಿ ಬೆಂಕಿಯನ್ನು ಊದಿ ಸಾಹಸ ಪ್ರದರ್ಶಿಸುವ ದೃಶ್ಯವಿದೆ. ಬಹಳ ಆತ್ಮವಿಶ್ವಾಸದಿಂದಲೇ ಈ ಯುವಕ ಈ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿದ್ದ. ಆದರೆ, ಇದಾದ ಸ್ವಲ್ಪ ಹೊತ್ತಿನಲ್ಲೇ ಅನಾಹುತ ನಡೆದಿತ್ತು. ಅದೇನೆಂದರೆ, ಈತ ತನ್ನ ಬಾಯಲ್ಲಿದ್ದ ಪೆಟ್ರೋಲನ್ನು ಬೆಂಕಿಗೆ ಊದುತ್ತಿದ್ದಂತೆಯೇ ಬೆಂಕಿ ಈತನ ಗಡ್ಡಕ್ಕೂ ಹೊತ್ತಿಕೊಂಡಿತ್ತು. ಆಗ ತಕ್ಷಣ ಅಲ್ಲೇ ಇದ್ದ ಸ್ನೇಹಿತರು ಈತನ ಸಹಾಯಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಈ ಮೂಲಕ ದುರಂತ ತಪ್ಪಿದೆ.