ನಿಮ್ಮ ಫೋನಿನಲ್ಲಿ ಈ 12 ಕಳ್ಳ ಆಪ್‌ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ!..ಏಕೆ ಗೊತ್ತಾ?
February 04, 2023
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸುರಕ್ಷಿತವಾಗಿಡಲು ಗೂಗಲ್ ಸಂಸ್ಥೆಯು ತೆಗೆದುಕೊಳ್ಳುವ ಪರಿಣಾಮಕಾರಿ ಕ್ರಮಗಳು ಸಹ ಸೈಬರ್ ಕ್ರಿಮಿಗಳನ್ನು ಹೊಸಕಿಹಾಕಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಡೆವಲಪರ್‌ಗಳ ರೂಪದಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ತಲುಪುತ್ತಿರುವ ಹಾಗೂ ಹಲವು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವ ಅಪ್ಲಿಕೇಶನ್ಗಳು ಇವಾಗಿದ್ದು....
ಮೊಬೈಲ್ ಬಳಕೆದಾರರನ್ನು ವಂಚಿಸುವ ಅಥವಾ ಮೋಸದ ಬಲೆಗೆ ಬೀಳಿಸಬಹುದಾದ ಮತ್ತಷ್ಟು ಜನಪ್ರಿಯ ಅಪ್ಲಿಕೇಶನ್‌ಗಳನ್ನು ಗೂಗಲ್ ಗುರುತಿಸಿದ್ದು, ಬಳಕೆದಾರರಿಗೆ ಅಪಾಯ ತಂದೊಡ್ಡಬಹುದಾದ 12 ಜನಪ್ರಿಯ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ನಿಷೇಧಿಸಿದೆ. ಕ್ಯಾಶ್ ರಿವಾರ್ಡ್, ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಳಕೆದಾರರಿಗೆ ವಂಚಿಸುವ ಅಥವಾ ಬಳಕೆದಾರರನ್ನು ಇತರ ವೆಬ್‌ಸೈಟ್, ಇತರ ಮಾಲ್‌ವೇರ್ ಡೌನ್‌ಲೋಡ್ ಮಾಡಲು ಪ್ರಚೋದಿಸುವ ಈ ಅಪ್ಲಿಕೇಶನ್‌ಗಳನ್ನು ಮಿಲಿಯನ್‌ಗಿಂತಲೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿದ್ದು, ಹಲವು ಭರವಸೆ ನೀಡಿ ಬಳಕೆದಾರರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿರುವ ಈ ಕೆಲವು ಅಪ್ಲಿಕೇಶನ್‌ಗಳನ್ನು ಬಳಕೆದಾರರು ಈ ಕೂಡಲೇ ತೆಗೆದುಹಾಕುವಂತೆ ಕೋರಲಾಗಿದೆ.
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸುರಕ್ಷಿತವಾಗಿಡಲು ಗೂಗಲ್ ಸಂಸ್ಥೆಯು ತೆಗೆದುಕೊಳ್ಳುವ ಪರಿಣಾಮಕಾರಿ ಕ್ರಮಗಳು ಸಹ ಸೈಬರ್ ಕ್ರಿಮಿಗಳನ್ನು ಹೊಸಕಿಹಾಕಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಡೆವಲಪರ್‌ಗಳ ರೂಪದಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ತಲುಪುತ್ತಿರುವ ಹಾಗೂ ಹಲವು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವ ಅಪ್ಲಿಕೇಶನ್ಗಳು ಇವಾಗಿದ್ದು, ಬಳಕೆದಾರರು ಆಪ್‌ಗಳನ್ನು ಬಳಸುವಾಗ ಹಲವು ಭರವಸೆಗಳನ್ನು ನೀಡಿವೆ. ಇದರ ಜೊತೆಗೆ ಬಳಕೆದಾರರಿಗೆ ಕ್ಯಾಶ್ ರಿವಾರ್ಡ್, ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ವಂಚಿಸಲಾಗಿದೆ. ಹೀಗಾಗಿ, ಈಗಾಗಲೇ ಇಂತಹ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವ ಬಳಕೆದಾರರು ತಕ್ಷಣವೇ ಈ ಆಪ್‌ಗಳನ್ನು ಡಿಲೀಟ್ ಮಾಡಲು ಗೂಗಲ್ ಸೂಚಿಸಿದೆ.
Golden Hunt - 100K downloads
Reflector - 100K downloads
Seven Golden Wolf blackjack - 100K downloads
Unlimited Score - 50K downloads
Big Decisions - 50K downloads
Jewel Sea – 10K downloads
Lux Fruits Game – 10K downloads
Lucky Clover – 10K downloads
King Blitz – 5K downloads
Lucky Hammer – 1K downloads
ಕೆಲವೊಂದು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು Play Store ಸ್ಕ್ರೀನಿಂಗ್ ಪ್ರಕ್ರಿಯೆಯಲ್ಲಿ ಪತ್ತೆಹಚ್ಚಲು ಕಷ್ಟವಾಗುತ್ತದೆ. Google ನಿಂದ ಮಾಡಿದ ಅಪ್ಲಿಕೇಶನ್‌ಗಳ ಸಾಮಾನ್ಯ ಭದ್ರತಾ ಸ್ಕ್ರೀನಿಂಗ್ ಅನ್ನು ಬೈಪಾಸ್ ಮಾಡಲು ಹ್ಯಾಕರ್‌ಗಳು ಉತ್ತಮ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ ನೀವು ಈ ಮೇಲಿನ ಅಪ್ಲಿಕೇಶನ್‌ಗಳಲ್ಲಿ ಯಾವುದನ್ನಾದರೂ ಡೌನ್‌ಲೋಡ್ ಮಾಡಿದ್ದರೆ, ಕೂಡಲೇ ಡಿಲೀಟ್ ಮಾಡಿಬಿಡಿ. ಗೂಗಲ್ Play Store ನಿಂದಲೂ ಅಪರಿಚಿತ ಡೆವಲಪರ್‌ಗಳು ಹೋಸ್ಟ್ ಮಾಡಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರಿಕೆಯನ್ನು ವಹಿಸಿ. ವಿಶ್ವಾಸಾರ್ಹ ಮತ್ತು ಸುರಕ್ಷಿತ ಎಂದು ನಿಮಗೆ ತಿಳಿದಿರುವ ಕಂಪನಿಗಳು ಅಥವಾ ಸಾಕಷ್ಟು ಜನರು ರಿವ್ಯೂ ಮಾಡಿರುವ ಉತ್ತಮ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿ.